ಅಭಿಪ್ರಾಯ / ಸಲಹೆಗಳು

ನೈಸರ್ಗಿಕ ಅನಿಲ ಕೊಳವೆ ಮಾರ್ಗ

ಟ್ರಂಕ್ ಕೊಳವೆ ಮಾರ್ಗ

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ದಾಭೋಲ್ ನಿಂದ ಬೆಂಗಳೂರುವರೆಗೆ ಅನಿಲ ಸರಬರಾಜು ಮಾಡಲು ೭೪೬ ಕಿ.ಮೀ ಉದ್ದದ ೧೬ ಎಂಎಂಎಸ್ ಸಿ.ಎಮ್.ಡಿ ವಿನ್ಯಾಸ ಸಾಮರ್ಥ್ಯದ ಟ್ರಂಕ್ ಕೊಳವೆ ಮಾರ್ಗ ಅಳವಡಿಸುವಿಕೆ ಕೈಗೆತ್ತಿಕೊಂಡು ಮುಗಿಸಿರುತ್ತದೆ. ಕೊಳವೆ ಮಾರ್ಗವು ಕರ್ನಾಟಕದ ಒಂಭತ್ತು ಜಿಲ್ಲೆಗಳಾದ ಬೆಳಗಾವಿ, ಗದಗ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಮತ್ತು ರಾಮನಗರ ಮೂಲಕ ಹಾದು ಹೋಗುತ್ತದೆ. ರಾಜ್ಯದಲ್ಲಿ ಗೇಲ್ ರವರ ಅನಿಲ ಕೊಳವೆ ಮಾರ್ಗದ ಅಳವಡಿಕೆಯಲ್ಲಿ ಕೆಎಸ್ಐಐಡಿಸಿಯು ತನ್ನ ನೋಡಲ್ ಏಜೆಂಟ್ ಪಾತ್ರವನ್ನು ಮುಂದುವರೆಸಿರುತ್ತದೆ. ಕೊಳವೆ ಮಾರ್ಗವು ಈ ಕೆಳಗೆ ತೋರಿಸಿರುವಂತೆ ೧೮.೦೨.೨೦೧೩ ರಂದು ಕಾರ್ಯಾರಂಭ ಮಾಡಿರುತ್ತದೆ.

            

ನಗರ ಅನಿಲ ಹಂಚಿಕೆ(ಸಿಜಿಡಿ)

ಪೆಟ್ರೋಲಿಯಂ & ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (ಪಿ.ಎನ್.ಜಿ.ಆರ್.ಬಿ.) ಅವರು ಬೆಂಗಳೂರು ವಲಯದಲ್ಲಿ ಸಿಜಿಡಿ ಒದಗಿಸುವ ಸಲುವಾಗಿ ಕರೆದಿರುವ ಟೆಂಡರಿನಲ್ಲಿ ಮೆ. ಗೇಲ್ ಗ್ಯಾಸ್ ಲಿಮಿಟೆಡ್ ಇವರು ಯಶಸ್ವಿ ಬಿಡ್ಡರ್ ಆಗಿರುತ್ತಾರೆ. ವಿವರಗಳನ್ನು ಕೆಳಗೆ ನೀಡಲಾಗಿದೆ.

            

ಸಿಜಿಡಿ ಜಾಲವು ನಗರಗಳಲ್ಲಿರುವ ಮನೆಗಳು, ವಾಹನಗಳ ಸಿ ಎನ್ ಜಿ ಮತ್ತು ವಾಣಿಜ್ಯ / ಕೈಗಾರಿಕಾ ಇಂಧನದ ಬೇಡಿಕೆಯನ್ನು ಪೂರೈಸಲಿದೆ.

 • ಜಿಎಐಎಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆಯು ಸಿಜಿಡಿ ಯೋಜನೆಯನ್ನು ಪಡೆದುಕೊಂಡಿರುತ್ತದೆ. ಬೆಂಗಳೂರು ವಲಯವು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡಿರುತ್ತದೆ – ೪೩೯೫ ಚದರ ಕಿ.ಮೀ.ಗಳು.
 • ಪ್ರಾರಂಭದಲ್ಲಿ ೫ ವರ್ಷಗಳ ಗುರಿ: ೧೫೮೩ ಇಂಚ್-ಕಿಮೀ; ೧.೩೨ ಲಕ್ಷ ಪಿ ಎನ್ ಜಿ ಸಂಪರ್ಕಗಳು; ಅಂದಾಜು ವೆಚ್ಚ – ರೂ ೭೪೯ ಕೋಟಿಗಳು.
 • ಪ್ರಗತಿ: ೬೯೯ ಕಿ.ಮೀ. ಕೊಳವೆ ಮಾರ್ಗ ಅಳವಡಿಸಿದೆ; ೨೮೫೦೦ ಪಿಎನ್ ಜಿ ಸಂಪರ್ಕಗಳು ಮುಗಿದಿರುತ್ತದೆ; (೩೫೦೦ ಮನೆಗಳಿಗೆ ಅನಿಲವನ್ನು ಸರಬರಾಜು ಮಾಡಲಾಗುತ್ತಿದೆ); ಪ್ರೇಮ್ ನಗರದಲ್ಲಿ (ಬೆಗ್ಗರ್ಸ್ ಕಾಲೋನಿ) ಸಿಎನ್ ಜಿ ಸ್ವೇಷನ್ ವಾಣಿಜ್ಯ ವಹಿವಾಟಿನ ಅಂಚಿನಲ್ಲಿರುತ್ತದೆ.
 • ಬಿಇಎಲ್, ಜಿಂದಾಲ್ ಕಾಲೋನಿ, ಹೆಚ್ ಎಸ್ ಆರ್ ಬಡಾವಣೆ, ಯಶವಂತಪುರ, ಸಿಂಗಸಂದ್ರ ಮತ್ತು ಬೆಳ್ಳಂದೂರು ಪ್ರಧೇಶಗಳಲ್ಲಿ ಅನಿಲವನ್ನು ಸರಬರಾಜು ಮಾಡಲಾಗುತ್ತಿದೆ.

ಮೆ. ಗೇಲ್ (Gail) / ಗೇಲ್ ಗ್ಯಾಸ್ ಲಿಮಿಟೆಡ್ ಇವರೊಂದಿಗೆ ರೂ.೨೦೦ ಕೋಟಿಯ ಅಧಿಕೃತ ಬಂಡವಾಳದ ಜಂಟೀ ಉದ್ಯಮ ಕಂಪನಿಯನ್ನು ಸ್ಥಾಪಿಸಲು (ಜೆವಿಸಿ) ರಾಜ್ಯ ಸರ್ಕಾರದ ಏಜೆನ್ಸಿಯಾಗಿ ಕೆಎಸ್ಐಐಡಿಸಿಯನ್ನು ಗೊತ್ತುಪಡಿಸಲಾಗಿರುತ್ತದೆ. ಜಿಎಐಎಲ್ / ಗೇಲ್ ಗ್ಯಾಸ್ ಲಿಮಿಟೆಡ್ ಇವರು ಕಂಪನಿಯ 26% ಶೇರುಗಳನ್ನು ಹೊಂದಿದ್ದರೆ, ಕೆಎಸ್ಐಐಡಿಸಿಯು ೨೪% ಶೇರುಗಳನ್ನು ಹೊಂದಿ, ಉಳಿದ ೫೦% ಶೇರುಗಳನ್ನು ಹಣಕಾಸು ಸಂಸ್ಥೆಗಳು, ಹೂಡಿಕೆದಾರರು ಮತ್ತು ಸ್ರಾಟೆಜಿಕ್ ಪಾಲುದಾರರಿಗೆ (ಹಣಕಾಸು ಸಂಸ್ಥೆಗಳ ಸ್ರಾಟೆಜಿಕ್ ಪಾಲುದಾರರು ಮತ್ತು ಅವರ ಅಂಗ ಸಂಸ್ಥೆಗಳಲ್ಲಿ ಯಾವುದೇ ಒಬ್ಬ ಹೂಡಿಕೆದಾರರಿಗೆ ೨೦%ಗಿಂತ ಹೆಚ್ಚು ಶೇರು ಪಡೆಯಲು ಅವಕಾಶ ನೀಡಲಾಗುವುದಿಲ್ಲ) ನೀಡಲಾಗುವುದು.

ಇತ್ತೀಚಿನ ನವೀಕರಣ​ : 30-11-2020 11:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080