ಅಭಿಪ್ರಾಯ / ಸಲಹೆಗಳು

ಏರ್ಸ್ಟ್ರಿಪ್ಗಳು

 

ರಾಜ್ಯದಲ್ಲಿ ಏರ್‌ಸ್ಟ್ರಿಪ್ಸ್ ಗಳ ಅಭಿವೃದ್ಧಿ

  • ಕೆಎಸ್ಐಐಡಿಸಿ – ಏರ್‌ಸ್ಟ್ರಿಪ್ಸ್ ಗಳ ಅಭಿವೃದ್ಧಿಯಲ್ಲಿ ನೋಡಲ್ ಏಜೆನ್ಸಿಯಾಗಿರುತ್ತದೆ.
  • ಉದ್ದೇಶಿತ ಏರ್‌ಸ್ಟ್ರಿಪ್ಸ್ ಗಳು : ಚಿಕ್ಕಮಂಗಳೂರು, ಕಾರವಾರ, ಮಡಿಕೇರಿ (ಕುಶಾಲನಗರ), ರಾಯಚೂರು, ಗದಗ, ಬಾಗಲಕೋಟೆ, ದಾವಣಗೆರೆ ಮತ್ತು ಉಡುಪಿ.
  • ನಾಗರಿಕ ವಿಮಾನಯಾನ ಸಚಿವಾಲಯವು, ರಾಷ್ಟ್ರೀಯ ನಾಗರೀಕ ವಿಮಾನಯಾನ ನೀತಿಯನ್ನು (ಜೂನ್ ೨೦೧೬) ಮತ್ತು ವಿಭಾಗೀಯ ಸಂಪರ್ಕ ಯೋಜನೆಯನ್ನು { ಆರ್.ಸಿ.ಎಸ್- ಉಡಾನ್ (ಅಕ್ಟೋಬರ್ ೨೦೧೬ ಮತ್ತು ಆಗಸ್ಟ್ ೨೦೧೭)} ಲಿಂಕ್: – ಮೋಕಾ-ಏನ್ಸಿಎಪಿ-೨೦೧೬ – ಮೋಕಾ-ಆರ್ಸಿಎಸ್-ಉಡಾನ್-೨೦೧೭
  • ಚಿಕ್ಕಮಂಗಳೂರು, ಕಾರವಾರ ಮತ್ತು ಮಡಿಕೇರಿಯಲ್ಲಿ (ಕುಶಾಲನಗರ) ಏರ್‌ಸ್ಟ್ರಿಪ್ಸ್ ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುತ್ತಿದೆ.
 

ಅರ್ ಸಿಎಸ್ – ಕರ್ನಾಟಕದಿಂದ ಕೈ ಗೊಳ್ಳಲಾಗಿರುವ ಕ್ರಮ

1. ಕರ್ನಾಟಕ ಸರ್ಕಾರ ಮತ್ತು ನಾಗರೀಕ ವಿಮಾನಯಾನ ಸಚಿವಾಲಯದ ನಡುವೆ ದಿನಾಂಕ ೨೦ನೇ ಏಪ್ರಿಲ್ ೨೦೧೭ರಂದು MoUಗೆ ಸಹಿಮಾಡಲಾಗಿರುತ್ತದೆ.

2. ಆರ್ ಸಿಎಸ್ ಅಡಿಯಲ್ಲಿ ಕರ್ನಾಟಕ ಸರ್ಕಾರದ ರಿಯಾಯಿತಿಗಳು : (ಸರ್ಕಾರದ ದಿನಾಂಕ ೨೮.೦೪.೨೦೧೭ರ ಅಧಿಸೂಚನೆ)

    • ಆರ್ ಸಿಎಸ್ ವಿಮಾನ ನಿಲ್ದಾಣಗಳಿಗೆ
  • ವಿಜಿಎಫ್ ನಲ್ಲಿ ೨೦% ಪಾಲು ಕೊಡುವುದು
  • ಆರ್ ಸಿಎಸ್ ವಿಮಾನ ನಿಲ್ದಾಣಗಳಿಗೆ ಕನಿಷ್ಟ ದರದಲ್ಲಿ, ಅಗತ್ಯವಾದರೆ ಉಚಿತವಾಗಿ ಮತ್ತು ಋಣಭಾರ ರಹಿತವಾದ ಜಮೀನನ್ನು ನೀಡುವುದು.
  • ಭದ್ರತೆ ಮತ್ತು ಬೆಂಕಿ ಸೇವೆಗಳನ್ನು ಉಚಿತವಾಗಿ ಕೊಡುವುದು.
  • ವಿದ್ಯುತ್, ನೀರು ಮತ್ತು ಇತರ ಅಗತ್ಯ ಸೇವೆಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವುದು.
    • ಆರ್ ಸಿಎಸ್ ವಿಮಾನಯಾನ ನಿರ್ವಾಹಕರಿಗಾಗಿ
  • ಬೆಂಗಳೂರು ಮತ್ತು ಮಂಗಳೂರು (೨೮%), ಹುಬ್ಬಳ್ಳಿ ಮತ್ತು ಬೆಳಗಾವಿ (೪%) ವಿಮಾನ ನಿಲ್ದಾಣವನ್ನು ಹೊರತುಪಡಿಸಿ ಆರ್ ಸಿಎಸ್ ವಿಮಾನ ನಿಲ್ದಾಣಗಳ ಮೇಲೆ ಮಾರಾಟ ತೆರಿಗೆಯನ್ನು (ಎಸ್ ಟಿ) ೧%ಗೆ ಇಳಿಸುವುದು.
 

ನೋ ಸ್ಟ್ರಿಪ್ ವಿಮಾನ ನಿಲ್ದಾಣಗಳು ಮತ್ತು ಏರ್‌ಸ್ಟ್ರಿಪ್ಸ್ ಗಳಲ್ಲಿ ಸೌಲಭ್ಯಗಳು

1. ವಿಮಾನ ನಿಲ್ದಾಣಗಳು / ಏರ್‌ಸ್ಟ್ರಿಪ್ಸ್ ಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿರಬೇಕು (ಏರ್‌ಸ್ಟ್ರಿಪ್ಸ್, ಟರ್ಮಿನಲ್ ಗಳಲ್ಲಿ ಭದ್ರತಾ ಚೌಕಿ, ಬೇಲಿ, ಸ್ಥಳೀಯ ಪೋಲಿಸರಿಂದ ಭದ್ರತೆ ಇತ್ಯಾದಿ)

2. ನೋ ಫ್ರಿಲ್ ವಿಮಾನ ನಿಲ್ದಾಣಗಳ ಮಾದರಿಗಳನ್ನು ಅಖೈರುಗೊಳಿಸಲಾಗುತ್ತಿದೆ; ಅಖೈರುಗೊಳಿಸಲ್ವಟ್ಟ ಮಾದರಿಯನ್ನು ವಿಮಾನಯಾನ ಸಚಿವಾಲಯ / ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಇವರ ಒಪ್ಪಿಗೆಗೆ ಕಳುಹಿಸಲಾಗುವುದು.

ಏರೋ-ಸ್ಪೋರ್ಟ್ಸ್ ಚಟುವಟಿಕೆಗಳು, ಹಾರಾಟ ತರಬೇತಿ ಸಂಸ್ಥೆ, ಏರೋ ಮಾಡೆಲಿಂಗ್ ಮತ್ತು ವಸ್ತು ಸಂಗ್ರಹಾಲಯ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವಂತಹ ವಾಣಿಜ್ಯಾತ್ಮಕವಾಗಿ ಕಾರ್ಯಸಾಧ್ಯವಾಗುವಂತಹ ಸಮಗ್ರವಾದ ಏರ್‌ಸ್ಟ್ರಿಪ್ಸ್ ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.

ಚಿಕ್ಕಮಗಳೂರು ಏರ್‌ಸ್ಟ್ರಿಪ್ಸ್

  • ಲಭ್ಯವಿರುವ ಭೂಮೀನು ೧೦೦ ಎಕರೆಗಳು.
  • ಹಾಲಿ ಇರುವ ಏರ್‌ಸ್ಟ್ರಿಪ್ಸ್ ಮತ್ತು ಹೆಲಿಪ್ಯಾಡ್ ನ ಉನ್ನತೀಕರಣವನ್ನು ಕೈಗೊಳ್ಳಲಾಗುವುದು.
  • ಸೆಸ್ಸ್ನಾ ಗ್ರಾಂಡ್ ಕಾರವಾನ್, ಪೈಲಾಟಸ್, ಬಿ ೨೦೦ ಮುಂತಾದ ವಿಮಾನಗಳನ್ನು ಸೂಕ್ತವಾಗಿರುವ ಸುಮಾರು ೧ ಕಿಮೀ ಉದ್ದದ ಏರ್‌ಸ್ಟ್ರಿಪ್ಸ್ ಗಳನ್ನು ಅಭಿವೃದ್ಧಿಪಡಿಸಲುದ್ದೇಶಿಸಲಾಗಿದೆ.
 

ಕಾರವಾರ ಏರ್‌ಸ್ಟ್ರಿಪ್ಸ್

  • ಜಮೀನನ್ನು ಗುರುತಿಸಲಾಗಿರುತ್ತದೆ; ಕಾಡಿನ ಜಮೀನನ್ನು ವರ್ಗಾಯಿಸಲು ಅರ್ಜಿ ಸಲ್ಲಿಸಲಾಗಿದೆ.
  • ವಿವರವಾದ ಸರ್ವೆಯನ್ನು (೩೫೦ ಎಕರೆಗಳು) ನಡೆಸಲಾಗಿರುತ್ತದೆ.
  • ಸಿ ೨೦೮ಬಿ, ಪೈಲಾಟಸ್, ಬಿ ೨೦೦ ಮುಂತಾದ ವಿಮಾನಗಳಿಗೆ ಸೂಕ್ತವಾಗಿರುವ ಸುಮಾರು 1 ಕಿಮೀ ಉದ್ದದ ಏರ್‌ಸ್ಟ್ರಿಪ್ಸ್ ಗಳನ್ನು ಮತ್ತು ಹೆಲಿಪ್ಯಾಡ್ ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
 

ಮಡಿಕೇರಿ ಏರ್‌ಸ್ಟ್ರಿಪ್ಸ್ (ಕುಶಾಲನಗರ)

  • ಸೈನಿಕ ಶಾಲೆಯ ಪಕ್ಕದಲ್ಲಿ ೯೫೦ ಮೀಟರ್ ಉದ್ದದ ಏರ್‌ಸ್ಟ್ರಿಪ್ಸ್ ನ್ನು ಅಭಿವೃದ್ದಿಪಡಿಸಲು ೪೯.೫ ಎಕರೆ ಜಮೀನನ್ನು ಗುರುತಿಸಲಾಗಿದೆ.
  • ಇದು ಪ್ರಾರಂಭಿಕ ಹಂತದಲ್ಲಿರುತ್ತದೆ.
  • ಏರ್‌ಸ್ಟ್ರಿಪ್ಸ್ ಮತ್ತು ಹೆಲಿಪ್ಯಾಡ್ ನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

 

ಇತ್ತೀಚಿನ ನವೀಕರಣ​ : 30-11-2020 05:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080